ಗಂಗ್‍ಟೋಕ್-
ಭಾರತಕ್ಕೆ ಉತ್ತರದಲ್ಲಿರುವ ಸಿಕ್ಕಿಂ ರಾಜ್ಯದ ರಾಜಧಾನಿ ಡಾರ್ಜಿಲಿಂಗಿನ ಈಶಾನ್ಯಕ್ಕೆ 28 ಮೈ. ದೂರದಲ್ಲಿ ಭಾರತ-ಟಿಬೆಟ್ ನಡುವಣ ವ್ಯಾಪಾರ ಮಾರ್ಗದಲ್ಲಿ ಉ.ಅ. 270 20' ಪೂ.ರೇ. 880 38' ಮೇಲೆ ಇದೆ. ಜನಸಂಖ್ಯೆ 6,848 (1961). ಸಿಕ್ಕಿಂ ರಾಜ್ಯ ಬೆಟ್ಟಗಳಿಂದ ಅವೃತವಾದ್ದು. ಪರ್ವತಪ್ರದೇಶವಾಗಿರುವುದರಿಂದ ಇಲ್ಲಿ ಹೆಚ್ಚಿನ ಆಧುನಿಕ ವಾಹನ ಸೌಕರ್ಯಗಳಿಲ್ಲ. 1954 ರಲ್ಲಿ ಸಿಕ್ಕಿಮ್‍ನಲ್ಲಿ ಸಪ್ತವಾರ್ಷಿಕ ಯೋಜನೆ ಜಾರಿಗೆ ಬರುವ ಮುನ್ನ ಗಂಗ್‍ಟೊಕ್‍ಗೂ ಬಂಗಾಳ-ಸಿಕ್ಕಿಂ ಗಡಿಯ ಬಳಿಯಲ್ಲಿರುವ ರಂಗ್‍ಪೊಗೂ ನಡುವೆ 48 ಕಿಮೀ.ಗಳಷ್ಟು ದೂರದ ಮೋಟಾರ್ ಹೆದ್ದಾರಿ ಮಾತ್ರ ಇತ್ತು 1954ರ ಅನಂತರ ಗಂಗ್‍ಟೊಕ್‍ನಿಂದ ದಕ್ಷಿಣಕ್ಕೂ ಉತ್ತರದಲ್ಲಿರವ ಲಾಚೆನ್‍ಗೂ ಜೀಪ್ ದಾರಿಗಳೂ ಮೋಟಾರು ಹೆದ್ದಾರಿಗಳೂ ನಿರ್ಮಣವಾದುವು. ಇದರಿಂದಾಗಿ ಉತ್ತರ ಸಿಕ್ಕಿಮ್‍ನಿಂದ ರಾಜ್ಯದ ದಕ್ಷಿಣ ಭಾಗಗಳಿಗೆ ಅರಣ್ಯೋತ್ಪನ್ನ, ಸೇಬು, ಆಲೂಗಡ್ಡೆ ಮುಂತಾದವನ್ನು ಸಾಗಿಸುವ ಸೌಲಭ್ಯ ಏರ್ಪಟ್ಟಿತು. ರಿಷಿ, ಜೆಲೆಪ್ಲಗಳಿಂದ ಗಂಗ್‍ಟೊಕ್‍ಗೆ ಇದ್ದ ಕುದುರೆಮಾರ್ಗ ಜೀಪ್ ದಾರಿಯಾಗಿ ಪರಿವರ್ತನೆಗೊಂಡಿದೆ. ಗಂಗ್‍ಟೊಕ್‍ಗೂ ಸಿಕ್ಕಿಮ್‍ನ ಇತರ ಸ್ಥಳಗಳಿಗೂ ಈಗ ತಕ್ಕಮಟ್ಟಿನ ರಸ್ತೆ ಸಂಪರ್ಕ ಏರ್ಪಟ್ಟಿದೆ.

	ಗಂಗ್‍ಟೊಕ್‍ನಲ್ಲಿ ಸಿಕ್ಕಿಂ ರಾಜನ ಅರಮನೆ, ಮಂತ್ರಿಮಂಡಲದ ಸದಸ್ಯರ ನಿವಾಸ ಸ್ಥಾನಗಳು ಮತ್ತು ಸರ್ಕಾರಿ ಸೌಧಗಳಲ್ಲದೆ ಶಾಲೆಕಾಲೇಜುಗಳು, ಜೈಲು, ಆಸ್ಪತ್ರೆಗಳು ಉಂಟು. ಇಲ್ಲಿಂದ ನೈಋತ್ಯಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ರೂಮ್‍ಟೆಮ್‍ನ ಬೌದ್ಧ ಮಠವಿದೆ. ಬೇಳೆ, ಮೆಕ್ಕೆಜೋಳ, ಅಕ್ಕಿ, ಕಿತ್ತಳೆಹಣ್ಣು-ಇವು ಇಲ್ಲಿ ವ್ಯಾಪಾರವಾಗುವ ಸರಕುಗಳು. 				*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ